ಡಿಸೆಂಬರ್ ೨ - ಡಿಸೆಂಬರ್ ತಿಂಗಳಿನ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೬ನೇ (ಅಧಿಕ ವರ್ಷದಲ್ಲಿ ೩೩೭ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೦೪ - ಪ್ಯಾರಿಸ್ನಲ್ಲಿ ನೆಪೊಲಿಯನ್ ಬೊನಪಾರ್ಟೆ ತನ್ನನ್ನು ತಾನೆ ಚಕ್ರವರ್ತಿಯಾಗಿ ಘೋಷಿಸಿಕೊಂಡನು. ೧೯೪೨ - ಎನ್ರಿಕೊ ಫೆರ್ಮಿ ನೇತೃತ್ವದ ತಂಡವೊಂದು ಮೊದಲ ಸ್ವತಃ ನಡೆಸಿಕೊಂಡು ಹೋಗುವ ಪರಮಾಣು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದರು. ೧೯೪೬ - ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಲು ಬ್ರಿಟಿಷ್ ಸರ್ಕಾರವು ಜವಹರಲಾಲ್ ನೆಹರೂ, ಬಲದೇವ್ ಸಿಂಗ್, ಜಿನ್ನ ಮತ್ತು ಲಿಯಾಖತ್ ಆಲಿ ಖಾನ್ರನ್ನು ಆಹ್ವಾನಿಸಿತು. ೧೯೭೧ - ಅಬು ಧಾಬಿ, ಅಜ್ಮಾನ್, ಫುಜೈರಾ, ಶಾರ್ಜಾ, ದುಬೈ ಮತ್ತು ಉಮ್ ಅಲ್ ಖುವೈನ್ ಒಟ್ಟಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಸ್ಥಾಪಿಸಿದವು. ೧೯೮೮ - ಬೆನಾಜಿರ್ ಭುಟ್ಟೊ ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಳು. ೧೯೮೪ - ಭೋಪಾಲ್ ದುರಂತ ಭಾರತವನ್ನೆ ಬೆಚ್ಚಿಬಿಳಿಸಿದ ಘಟನೆ ವಿಷಾನಿಲ ದುರಂತ. == ಜನನ == ೧೮೫೫ - ನಾರಾಯಣ ಗಣೇಶ್ ಚಂದವಾರ್ಕರ್, ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಸಂಸ್ಥಾಪಕ ಮತ್ತು ಸಮಾಜ ಸುಧಾರಕ ೧೮೫೯ - ಜಾರ್ಜ್ ಸ್ಯುರಾತ್, ಫ್ರಾನ್ಸ್ನ ಚಿತ್ರಕಾರ. ೧೯೦೬ - ಪೀಟರ್ ಕಾರ್ಲ್ ಗೋಲ್ಡ್‌ಮಾರ್ಕ್, ಅಮೇರಿಕಾದ ವಿದ್ಯುನ್ಮಾನ ಇಂಜಿನಿಯರ್ == ಮರಣ == ೧೫೪೭ - ಹೆರ್ನಾನ್ ಕೊರ್ತೆಜ್, ಸ್ಪೇನ್ನ ಅನ್ವೇಶಕ. ೧೯೮೦ - ಚೌಧರಿ ಮೊಹಮದ್ ಆಲಿ, ಪಾಕಿಸ್ತಾನದ ಪ್ರಧಾನಮಂತ್ರಿ. == ದಿನಾಚರಣೆಗಳು == ಲಾಒಸ್ - ರಾಷ್ಟ್ರೀಯ ದಿನಾಚರಣೆ. ಯುನೈಟೆಡ್ ಅರಬ್ ಎಮಿರೇಟ್ಸ್ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ